Tuesday, October 28, 2008

Navagraha

ಚಿತ್ರ: ನವಗ್ರಹ
ಬ್ಯಾನರ್: ತೂಗುದೀಪ ಪ್ರೊಡಕ್ಷನ್
ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್
ಗಾಯಕ : ಸೋನು ನಿಗಂ

ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ
ನನಗೆ ನನ್ ನನಗೆ
ಥರ ಥರ ಹೊಸಥರ
ಒಲವಿನ ಅವಸರ
ಹೃದಯಾನೇ ಜೋಕಾಲಿ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ
ನನಗೆ ನನ್ ನನಗೆ

ಋತು ಏಳು ಭೂಮಿಯ ಮೇಲೆ
ಪ್ರಣಯಾನೇ ಎಂಟನೇ ಓಲೆ
ತಿಳಿ ತಿಳಿ ಪ್ರೇಮ
ಇರೋದಂತು ನಾಲ್ಕೇ ವೇದ
ಪ್ರೀತಿ ತಾನೆ ಪಂಚಮ ವೇದ
ನಿಜ ನಿಜ ಪ್ರೇಮ
ನಾನು ನಿನ್ನಲೀ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೇ ಹೋದರೆ ಏನೋ ಭೀತಿ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ
ನನಗೆ ನನ್ ನನಗೆ

ಸಹಿ ಮಾಡು ನನ್ನೆದೆ ತುಂಬ
ನೀನೆ ಅದರ ತುಂಬ ತುಂಬ
ನಂಬು ನನ್ನ ನಲ್ಲೇ
ಒಂದೇ ಒಂದು ಮಾತು ಕೇಳು
ಎಲ್ಲ ಜನ್ಮ ನನ್ನನೆ ಆಳು
ನೀನೆ ನನ್ನ ಬಾಳು
ಯಾವ ತುದಿಯಲೀ ಇದ್ದರೂ
ನಾನು ನಿನ್ನನೇ ಕಾಯುವೆ
ಪ್ರೀತಿಸೇ ಪ್ರೀತಿ ಮಾಡೇ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ
ನನಗೆ ನನ್ ನನಗೆ
ಥರ ಥರ ಹೊಸಥರ
ಒಲವಿನ ಅವಸರ
ಹೃದಯಾನೇ ಜೋಕಾಲಿ

No comments: